ಬಿ.ಕಾಂ ಮೊದಲ ವರ್ಷದ ವಿಷಯಗಳಲ್ಲಿರುವ ಕೆಲವು ಕಾವ್ಯ , ಕವನಸಂಕಲಗಳನ್ನು ಬರೆದಿಡುವ ಒಂದು ಚಿಕ್ಕ ಪ್ರಯತ್ನ.
Tuesday, 21 July 2015
2} ರೈಲ್ವೇ ನಿಲ್ದಾಣದಲ್ಲಿ
2. ರೈಲ್ವೇ ನಿಲ್ದಾಣದಲ್ಲಿ
-ಕೆ.ಎಸ್.ನರಸಿಂಹಸ್ವಾಮಿ
' ಎಲ್ಲ್ಲಿದ್ದೀಯೇ ಮೀನಾ ?'
ಇಲ್ಲೇ ಇದ್ದೇನಮ್ಮ.
'ತೊಟ್ಟಿಲು , ಪೆಟ್ಟಿಗೆ , ಹಾಸಿಗೆ ?'
ಇಲ್ಲೇ ಇವೆಯಮ್ಮ.
ಏನನ್ನೋ ಮರೆತಂತಿದೆ ?'
ಮರೆಯುವುದೇ , ಹೇಗೆ ?
' ಏನನ್ನೋ ನೆನವಂತಿದೆ ?'
ನಾನಿರುವುದೆ ಹಾಗೆ.
' ಬಿಸಿನೀರಿದೆಯೇ ಮೀನಾ ,
ಮಗುವಿನ ಹಾಲಿನ ಪುಡಿಗೆ ?'
ಬೇಕಾದಷ್ಟಿದೆಯಮ್ಮ -
(ಕಣ್ಣಲ್ಲೂ ಜತೆಗೆ ).
' ಮಗುವನು ಹಿಡಿಯೇ ಹೀಗೆ,
ಕಪ್ಪಿಡುವೆನು ಹಣೆಗೆ -
ಮೈ ಬಿಸಿಯಾಗಿದೆಯಲ್ಲೆ
ಹೊರಡುವ ಸಮಯಕ್ಕೆ !'
ಘಂಟೆಯ ಹೊಡೆತಕೆ,ಸಿಳ್ಳಿಗೆ ,
ಬೀಸಿದ ಬಾವುಟಕೆ
ನಡುಗುತ್ತಿದೆ ಬಂಡಿಯ ಮೈ
ದೀಪದ ಬೆದರಿಕೆಗೆ.
ಕಿಟಕಿಯ ಜತೆಗೂ ಬರುವುದು
ಬೇಡಮ್ಮ , ಹೋಗು.
ಇಲ್ಲಿಂದಲೇ ಕೈಮುಗಿಯುವೆ -
ನಲ್ಲಿಂದಲೆ ಹರಸು.
ಕಂಬಿಗಳುದ್ದಕ್ಕು ಹಬ್ಬಿತು
ಎಂಜಿನ್ನಿನ ಕೂಗು :
'ಎಲ್ಲಿದ್ದೀಯೆ ಮೀನಾ ,
ಎಲ್ಲಿದ್ದೀಯೆ ?'
ಕಿಡಿಗಳು ಹೊರಳುವ ಹೊಗೆಯಲಿ
ಹೆಗ್ಗಾಲಿಗಳುರುಳು ;
ಇಲ್ಲೇ ಇದ್ದೇನಮ್ಮ ,
ಇಲ್ಲೇ ಇದ್ದೇನೆ.
'ಕಿಟಕಿಯ ಮುಚ್ಚಿಕೊ ಮೀನಾ,
ಕಿಡಿ ಬೀಳುವುದೊಳಗೆ', -
ಕಿಟಕಿಯ ಮಚ್ಚಿದೆನಮ್ಮ ,
ಕಿಡಿ ಬೀಳದ ಹಾಗೆ.
Subscribe to:
Post Comments (Atom)
No comments:
Post a Comment