3. ಬಾ ಇಲ್ಲಿ ಸಂಭವಿಸು….
- ಆನಂದತೀರ್ಥ ಪ್ಯಾಟಿ
ಆಶಯ :
'ಪ್ರಕೃತಿಯೇ ದೇವರು', ' ರೈತನೇ ದೇಶದ ಬೆನ್ನೆಲುಬು' ಎಂಬ ನುಡಿಗಳಿಂದು ಅರ್ಥಕಳೆದು ಕೊಳ್ಳುತ್ತಿವೆ. ಒಂದಡೆ ಶಿಕ್ಷಣದ ಗುರಿ ನೌಕರಿ ಎಂದು ಭಾವಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಅತಿವೃಷ್ಟಿ, ಅನಾವೃಷ್ಟಿ, ರಾಸಾಯನಿಕ ಗೊಬ್ಬರಗಳ ಅಸಮರ್ಪಕ ಬಳಕೆಯಿಂದ ಬರಡಾಗುತ್ತಿರುವ ಭೂಮಿ, ಕಳಪೆ ಬೀಜಗಳ ಅನಾಹುತಗಳು, ಕುಲಾಂತರಿ ಬೆಳೆಗಳ ಅವಘಡಗಳಿಂದಾಗಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. 'ಬೇಸಾಯ ಅಂದ್ರೆ, ನಾಸಾಯ, ನೀಸಾಯ, ಮನೆಮಂದಿಯೆಲ್ಲ ಸಾಯ' ಎಂಬಂತಹ ಮಾತುಗಳು ನಿಜವೇನೋ ಎನ್ನಿಸುವಂತಾಗಿದೆ ನಮ್ಮಲ್ಲಿ. ಆದರೆ ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿರುವ, ಸಾವಿರಾರು ಹೆಕ್ಟೇರ್ ಮರಭೂಮಿಯನ್ನು ಹೊಂದಿದ ಇಸ್ರೇಲ್ ನಂಥ ಪುಟ್ಟದೇಶವೊಂದು ಕೃಷಿಯಲ್ಲಿ ಚಮತ್ಕಾರವನ್ನೇ ಮಾಡುತ್ತಿದೆ. ತನಗೆ ಬೇಕಾದ್ದಕ್ಕಿಂತ ಹೆಚ್ಚು ಬೆಳೆದು ಸಾಧಿಸಿದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ. ಅಂದಮೇಲೆ ಹೇರಳ ಫರವತ್ತಾದ ಭೂಮಿಯನ್ನು ಹೊಂದಿದ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಪಡೆದ ಭಾರತಕ್ಕೆ ಏಕೆ ಇದು ಸಾಧ್ಯವಿಲ್ಲ? ಯೋಚಿಸಲೇಬೇಕಿದೆ.
ಭಾರತದಲ್ಲಿ ಹಸಿರು ಕ್ರಾಂತಿಯ ಬಳಿಕ ಹೈಬ್ರಿಡ್ ಬೀಜಗಳ ಮಾರಾಟ ದೊಡ್ಡ ವಹಿವಾಟಾಗಿ ಮಾರ್ಪಾಟಾಯಿತು. ಸಹಜವಾಗಿ ಬಹುರಾಷ್ಟ್ರೀಯ ಕಂಪನಿಗಳ ಕಣ್ಣು ಈ ವಲಯದ ಮೇಲೆ ಬಿತ್ತು. ಕ್ರಮೇಣ ಭಾರತದ ಬಹುತೇಕ ಸಾಂಪ್ರದಾಯಿಕ ಬೀಜಗಳು ಕಣ್ಮರೆಯಾಗಿ ಹೋದವು. ಕಳೆದುಕೊಂಡಿರುವ ಅಂಥ ಸಂಪತ್ತನ್ನು ಪುನಃ ಸಂರಕ್ಷಿಸಿ ರೈತರ ಹೊಲಕ್ಕೇ ಅದನ್ನು ಮರಳಿಸುವ ಯತ್ನಗಳು ಜರೂರಾಗಿ ಆಗಬೇಕಿದೆ.

No comments:
Post a Comment