ಶತಮಾನದ ಬಾಳಪ್ಪ ಆಶಯ

          2. ಶತಮಾನದ ಬಾಳಪ್ಪ
                     - ಗುಡಿಹಳ್ಳಿ ನಾಗರಾಜ

   ಆಶಯ : 
               ಸಾಹಿತ್ಯ ಪ್ರಕಾರಗಳಲ್ಲೆ ರಮ್ಯವಾದದ್ದು ನಾಟಕ ಜನರಲ್ಲಿಯ ಆಲಸ್ಯ ಪ್ರವೃತಿಯನ್ನು ದೂರಮಾಡಿ ಅವರಿಗೆ ರಂಜನೆಯ ಜೊತೆಗೆ ಜ್ಞಾನ, ಶಿಕ್ಷಣವನ್ನು ನೀಡುವ ಹಾಗೂ ಜನರನ್ನು ಲೋಭ, ಈರ್ಷ್ಯೆ ಮೊದಲಾದ ದುರ್ಗುಣಗಳಿಂದ ಮುಕ್ತರಾಗಿಸಲು ದೇವತೆಗಳ ಕೋರಿಕೆಯ ಮೇರೆಗೆ ಬ್ರಹ್ಮ ನಾಟಕವೆಂಬ ಐದನೆಯ ವೇದವನ್ನು ರಚಿಸಿದ ಎನ್ನುತ್ತಾನೆ ಭರತ, ತನ್ನ ನಾಟ್ಯ ಶಾಸ್ತ್ರದಲ್ಲಿ . ಮನರಂಜನೆಯ ಜೊತೆಜೊತೆಗೆ ಜನಸಾಮನ್ಯರಿಗೆ ಹಾಗೂ ದಿನ ನಿತ್ಯದ ಸಂಘರ್ಷಗಳಿಗೆ ಮುಖಾಮುಖಿಯಾಗುವ ಕಾರ್ಯವನ್ನು ಜನಪದ, ವೃತ್ತಿ ಹವ್ಯಾಸಿ ಹೀಗೆ ಎಲ್ಲ ರಂಗಭೂಮಿಗಳೂ ಮಾಡುತ್ತಲೆ ಬಂದಿವೆ. ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತ ' ಕಲೆಗಾಗಿ ಕಲೆ ಅಲ್ಲ, ಜನರಿಗಾಗಿ ಕಲೆ ' ಎಂಬುದನ್ನು ಸಾಬೀತು ಪಡಿಸಿವೆ.

                ನಾಟಕ ಕಲೆಗೆ ಪ್ರೇಕ್ಷಕ ಗಣ ಒಂದು ಕಣ್ಣಾದರೆ ನಟರು ಮತ್ತೊಂದು ಕಣ್ಣು, ಒಂದು ಪಾತ್ರವನ್ನು ನಿನ್ನೆಯ ಪುನರಾವರ್ತನೆಯಾಗದಂತೆ ನಿತ್ಯಂ ಪೊಸದಾಗಿ ಅಭಿನಯಿಸಿ ಪ್ರೇಕ್ಷಕರನ್ನು ರಂಗಸ್ಥಳಕ್ಕೆ ಸೆಳೆದರು. ಅಂತಹ ಪ್ರತಿಭಾಶಾಲಿ ಸೃಜನಶೀಲ ಕಲಾವಿದರೊಬ್ಬರ ಬಾಳ ಪಥವನ್ನು ಪರಿಚಯಿಸುತ್ತದೆ ಈ ಪಠ್ಯ.

No comments:

Post a Comment