ಗೊಬ್ಬರ ಕಾವ್ಯದ ಆಶಯ

                1. ಗೊಬ್ಬರ
                                -ಕುವೆಂಪು

  ಆಶಯ : 
      
                ಇಲ್ಲಿ,
                ಯಾರೂ ಮುಖ್ಯರಲ್ಲ
                ಯಾರೂ ಅಮುಖ್ಯರಲ್ಲ 
                ಯಾವುದೂ ಯಕಶ್ಚಿತವಲ್ಲ.

         ಈ ಭೂಮಿಯ ಒಳಗೆ ಮತ್ತು ಮೇಲೆ ಇರುವ ಚರಾಚರ ವಸ್ತುಗಳೆಲ್ಲಕ್ಕೂ ಪ್ರಾಮುಖ್ಯತೆ ಇದೆ. ಅಣುವಿನಿಂದ ಪರ್ವತದವರೆಗೆ ವೈರಸ್ ನಿಂದ ತಿಮಿಂಗಲದವರೆಗೆ ಯಾವುದೂ ಮೇಲಲ್ಲ; ಯಾವುದೂ ಕೀಳಲ್ಲ . ಎಲ್ಲವೂ ಕಾವ್ಯಕ್ಕೆ ವಸ್ತುವಾಗಬಲ್ಲವು.

        ಈ ಜಗತ್ತು ಕಂಡರಿಸಿದ ಚರಿತ್ರೆ, ಸಂಸ್ಕೃತಿಗಳ ವರ್ಣನೆ ಮೇಲು ನೋಟ, ತೇಲು ನೋಟದಿಂದ ಕೂಡಿದ್ದು ಕೆಲವಕ್ಕೆ ಮಾತ್ರ ಪ್ರಾಧ್ಯಾನತೆ ನೀಡಲಾಗಿದೆ. ಯಾವುದು ಕೀಳು, ಯಕಶ್ಚಿತ್ ಅಂದುಕೊಂಡ ಸಾಂಸ್ಕೃತಿಕ ಲೋಕಕ್ಕೆ ಚಾಟಿ ಬೀಸುವಂತೆ, ವಾಸ್ತವದ , ಕಟು ಸತ್ಯದ ಕನ್ನಡಿ ಹಿಡಿದಂತೆ , ಎಲ್ಲ ವಸ್ತುಗಳೂ ಬೆಳೆಯಲು , ಅರಳಲು ಜೊತೆ ಜೊತೆಗೆ ಒಂದರೊಡನೊಂದು ಪರಸ್ಪರ ಪ್ರಭಾವಿಸಬೇಕು, ಅವಲಂಬಿಸಬೇಕು ಎಂಬ ಮಹತ್ತರ ಸಂದೇಶವನ್ನು ಸಾರುವುದೇ ಈ ಕವನದ ಉದ್ದೇಶ.

         ಸಂಪ್ರದಾಯ ಬದ್ಧ ಉಪಾದಿಗಳನ್ನು ನಿರಂಕುಶಮತಿಗಳಾಗಿ ಮೆಟ್ಟಿ ನಿಲ್ಲಬೇಕೆಂದು ತಿಳಿಹೇಳುವ ಈ ಪದ್ಯ, ಈ ದೇಶದ ಜಾತಿ ಪದ್ಧತಿ , ಮೂಢನಂಬಿಕೆ ಸಾಮಾಜಿಕ ಅಸಮಾನತೆ ಹಾಗು ಪುರೋಹಿತಶಾಹಿ ಪ್ರವೃತ್ತಿಗಳನ್ನು ಅನಾವರಣಗೊಳಿಸುತ್ತದೆ. ಇದುವರೆಗೆ ಇದ್ದ ಕಟ್ಟು ಪಾಡುಗಳ ಪರಂಪರಾನುಗತವಾದ ಮಡಿವಂತಿಕೆಯನ್ನು ಸಾಹಿತ್ಯ ಸಾಂಸ್ಕೃತಿಕ , ಸಾಮಾಜಿಕ ಲೋಕದ ಹಳೆಬಾವಿಯೊಳಗಿನ ಬಗ್ಗಡವನ್ನು ಕಾಲಾಂತರದಿಂದ ಬಿದ್ದು ಹರಿದು ಚಿಂದಿ ಚೂರಾಗಿ ಕೊಳೆತು ದುರ್ನಾತ ಬೀರುವ ವಸ್ತುಗಳನ್ನು ಅನಾಮತ್ತು ಮೇಲೆತ್ತಿ ತೋರಿಸಿದ ಗರಡಾಳ ಈ "ಗೊಬ್ಬರ" ಕವನ.

No comments:

Post a Comment