ನಿಗೂಢ ಮನುಷ್ಯರು
- ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಆಶಯ :
ನಿಗೂಢತೆ ಎನ್ನುವುದು ಒಂದರ್ಥದಲ್ಲಿ ವಿಶ್ವದ ಸ್ವರೂಪವೇ ಆಗಿದೆ. ಪ್ರಕೃತಿಯಾಗಲಿ, ಮಾನವ ಜಗತ್ತಾಗಲಿ, ಗ್ರಹ-ತಾರೆಗಳನ್ನೊಳಗೊಂಡ ಇಡೀ ಯ್ಯೋಮ ಜಗತ್ತೇ ಆಗಲಿ ಎಂದೂ ತನ್ನ ಸ್ವರೂಪವನ್ನು ಸಂಪೂರ್ಣವಾಗಿ ತೆರೆದಿಡುವುದಿಲ್ಲ. ಎಷ್ಟೋ ಗುಟ್ಟುಗಳನ್ನು ತನ್ನೆದೆಯಲ್ಲೇ ಬಚ್ಚಿಟ್ಟುಕೊಂಡಿರುತ್ತದೆ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ಅದರ ಅರಿವಿನ ಪರಿಧಿಯನ್ನು ಮೀರಿ ಕೆಲವೊಮ್ಮೆ ಪ್ರಕೃತಿ ಸ್ಪೋಟಗೊಳ್ಳುತ್ತಿದೆ.
ಹಾಗೆಯೇ ಪ್ರಜ್ಞೆ ಎಂದಿಗೂ ತೆರೆದ ಪುಸ್ತಕವಲ್ಲ. ಅದು 'ಅಸಂಖ್ಯಾತ ಅನುಭವಗಳು ಎದ್ದೆದ್ದು ಮುಳುಗುವ ಕಡಲು', ಅನುಭವಗಳ ಉಬ್ಬರ-ಇಳಿತಗಳಲ್ಲಿ ಪ್ರಜ್ಞೆ ರೂಪುಗೊಳ್ಳುತ್ತಿರುತ್ತದೆ.ಅನುಭವ ಸಿದ್ಧ ವಸ್ತುವಲ್ಲ, ಅದೊಂದು ನಿರಂತರ ಪ್ರಕ್ರಿಯೆ.
ಮನುಷ್ಯ ಜಗತ್ತಿನ ಅಂತರಂಗದ ನಿಗೂಢತೆ ಹಾಗೂ ಪ್ರಕೃತಿ ಜಗತ್ತಿನ ಭಯಾನಕತೆಗಳು ಪರಸ್ಪರ ಮುಖಾಮುಖಿಯ ನೆಲೆಯಲ್ಲಿ ನಿಲ್ಲುತ್ತವೆ.ಕತ್ತಲೆಯ ಮೂಲೆಗಳಿಂದಲೇ ಅನುಭವದ ರಹಸ್ಯಗಳನ್ನು ಗ್ರಹಿಸುವ ಅನಿವಾರ್ಯತೆಯೂ ಮನುಷ್ಯದಾಗಿದೆ. ಆದರ್ಶದ ಅರಿವಿನಷ್ಟೇ ವಾಸ್ತವದ ತಿಳಿವೂ ಇದ್ದಾಗ ಮಾತ್ರ ಅನುಭವ ರಹಸ್ಯಗಳನ್ನು ಭೇದಿಸುವ ಶಕ್ತಿ ಮನುಷ್ಯನಿಗೆ ದಕ್ಕಬಲ್ಲದು.

No comments:
Post a Comment