ವಾಣಿಜ್ಯ ಕನ್ನಡ ಆಶಯ

  !V . ವಾಣಿಜ್ಯ ಕನ್ನಡ ಲೇಖನಗಳು

             ವಾಣಿಜ್ಯ ಕನ್ನಡ

  ಪ್ರಸ್ತಾವನೆ : 

                  ಜಾಗತೀಕರಣ, ವ್ಯಾಪಾರಿಕರಣದ ಇಂದಿನ ಆಧುನಿಕ ಯುಗದಲ್ಲಿ ಎಲ್ಲವೂ ಲೆಕ್ಕಚಾರ, ಪಕ್ಕಾ ವ್ಯವಹಾರದಿಂದ ಕೂಡಿದ ನಮ್ಮ ಬದುಕು ಹೊಸಹೊಸ ಸಂವೇದನೆಗಳಿಗೆ ಮುಖಾಮುಖಿಯಾಗಬೇಕಾಗಿದೆ. ಜಾಗತೀಕರಣವು ಸಾಂಸ್ಕೃತಿಕ, ಶೈಕ್ಷಣಿಕ, ಹಾಗೂ ಸಾಮಾಜಿಕ ವಲಯದಲ್ಲಿ ಉಂಟುಮಾಡುತ್ತಿರುವ ಪರಿಣಾಮ ಮತ್ತು ಒಡ್ಡುತ್ತಿರುವ ಸವಾಲುಗಳಿಗೆ ನಾವಿಂದು ಉತ್ತರ ಕಂಡುಕೊಳ್ಳಬೇಕಿದೆ.ಜೀವನದ ಪ್ರತಿಬಿಂಬವಾಗಿ, ಸಮಾಜದ ಕೈಗನ್ನಡಿಯಾಗಿ ಬರುವ ಸಾಹಿತ್ಯ ಕೂಡ ವಾಣಿಜ್ಯ ವ್ಯವಹಾರಗಳಿಗೆ ಪ್ರತಿಸ್ಪಂದಿಸಬೇಕಾಗಿದೆ.

                ಗ್ರಾಹಕ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಸ್ತುವಿನ ನಿರೀಕ್ಷೆಯಲ್ಲಿದ್ದರೆ ವ್ಯಾಪಾರಿ ಕಡಿಮೆ ಗುಣಮಟ್ಟದ ವಸ್ತುವನ್ನು ಹೆಚ್ಚು ಬೆಲೆಗೆ ಮಾರಿ ಲಾಭ ಮಾಡಿಕೊಳ್ಳುವ ಉದ್ದೇಶದಲ್ಲಿರುತ್ತಾನೆ. ಹೀಗಾಗಿ ಒಂದು ವಸ್ತು ಮಾರುವವನ ಜಾಣ್ಮೆ ಮತ್ತು ಕೊಳ್ಳುವವನ ಬುದ್ಧಿಮತ್ತೆಯನ್ನು ಆಧರಿಸಿ ಬೇರೆ ಬೇರೆ ಮಾರುಕಟ್ಟೆಯಲ್ಲಿ ಭಿನ್ನ ಬೆಲೆ ಪಡೆದುಕೊಳ್ಳುತ್ತ ಹೋಗುತ್ತದೆ. ಇಂಥ ಏರುಪೇರಿನ, ಮೋಸದ ವ್ಯಾಪಾರದಿಂದ ಗ್ರಾಹಕರನ್ನು ರಕ್ಷಿಸಲುಎಂಆರ್ ಪಿ ಕಾನೂನನ್ನು ಜಾರಿಗೆ ತರಲಾಗಿದೆ. ಕೊಳ್ಳುಬಾಕ ಸಂಸ್ಕೃತಿಗೆ ಸೇರಿಹೋಗಿರುವ ನಾವು ಮಾರುವವರಿಂದ 'ಕನ್ಸೂಮರ್ ಈಸ್ ದಿ ಕಿಂಗ್' ಎಂದು ಹೇಳಿಸಿಕೊಳ್ಳುತ್ತಲೇ ನಿತ್ಯವೂ ಮೋಸ ಹೋಗಬಹುದಾದ ಸ್ಥಿತಿಯಲ್ಲಿದ್ದೇವೆ.ಇಂಥ ನಮಗೆ ನಿಜಕ್ಕೂ ಎಂಆರ್ ಪಿ ಕಾನೂನಿನ ತಿಳುವಳಿಕೆ ಅಗತ್ಯವಾಗಿದೆ. 

                   ಜಗತ್ತಿನಲ್ಲೇ ಅತಿಹೆಚ್ಚು ಮಾನವ ಸಂಪನ್ಮೂಲಗ ಹೊಂದಿರುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಆದರೆ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯಿಂದಾಗಿ ಅಪಾರ ಮಾನವ ಶಕ್ತಿ ವ್ಯಯವಾಗಿ ದೇಶದ ಅಭಿವೃದ್ಧಿಗೆ ತೊಡಕಾಗುತ್ತಿದೆ. ಯುವಕರು ಮುಂದೆ ಬಂದು ಸ್ವಯಂ ಉದ್ಯೋಗದ ದಾರಿಗಳನ್ನು ಕಂಡುಕೊಳ್ಳುಲು ಯತ್ನಿಸಿದ್ದಾದರೆ ಭಾರತ ಆರ್ಥಿಕವಾಗಿ ಇಂದಿಗಿಂತ ಹೆಚ್ಚು ಶಕ್ತಿಶಾಲಿ ಆಗುವುದರಲ್ಲಿ ಸಂಶಯವಿಲ್ಲ. ನಿರುದ್ಯೋಗಿ ಯುವಕರ ನೆರವಿಗಾಗಿಯೇ ಕೇಂದ್ರದ 'ಎಂಆರ್ ಪಿಇ' ಸಚಿವಾಲಯ ಮತ್ತು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಸಹಯೋಗದಲ್ಲಿ ರೂಪಿಸಿ 'ಸಿಜಿಟಿಎಂಎಸಿ' ಮೂಲಕ ಸ್ವಯಂ ಉದ್ಯೋಗ ಮಾಡುವವರಿಗೆ ಬದ್ಧತೆ ಇದ್ದರೆ ಸಾಕು, ಭದ್ರತೆ ಬೇಡ ಎಂಬ ನಿಲುವಿನಿಂದ ಭದ್ರತಾ ರಹಿತ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಈ ಮಾಹಿತಿಯನ್ನು ಅರಿತು ಅದರ ಪ್ರಯೋಜನ ಪಡೆದುಕೊಳ್ಳಬೇಕಾದ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ.

              ಕೃಷಿ ಬಿಟ್ಟರೆ ಅತಿಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಅತಿಸಣ್ಣ ಸಣ್ಣ ಪ್ರಮಾಣದ ಉದ್ಯಮಗಳು ಇಂದು ಭರವಸೆಯ ಕ್ಷೇತ್ರ ಎನಿಸಿವೆ. ಈಗ ದೊಡ್ಡದಾಗಿ ಹೆಸರು ಮಾಡಿ ಬೆಳೆದಿರುವ ಬಹುತೇಕ ಉದ್ಯಮಗಳು ಶುರುವಾಗಿದ್ದು ಸಣ್ಣ ಪ್ರಮಾಣದಲ್ಲಿ ಇಂಥ ಸಣ್ಣ ಪ್ರಮಾಣದ ಉದ್ಯಮಗಳು ಯಾವುವು ಅವುಗಳನ್ನು ಹೇಗೆ ಪ್ರಾರಂಭಿಸಬಹುದು. ಯಾರಿಂದ ನೆರವು ಪಡೆಯಬಹುದು. ಇವೇ ಮುಂತಾದ ವಿಷಯಗಳ ತಿಳುವಳಿಕೆಯನ್ನಿಲ್ಲಿ ನೀಡಲಾಗಿದೆ. ಹಾಗೆಯೇ ಅಧಿಕ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದರ ಜತೆಗೆ ರಫ್ತು ವಹಿವಾಟು ಹೆಚ್ಚಳಕ್ಕೂ ಗಮನಾರ್ಹ ಕೊಡುಗೆ ನೀಡುತ್ತಿರುವ 'ವಿಶೇಷ ಆರ್ಥಿಕ ವಲಯ' (ಎಸ್ಇಜೆಡ್)ದ ಒಂದು ಸಂಕ್ಷಿಪ್ತ ಮಾಹಿತಿಯೂ ಇಲ್ಲಿದೆ.

No comments:

Post a Comment