ಕುಸಿಯುತ್ತಿರುವ ಸಾಂಸ್ಕೃತಿಕ ನೆಲೆಗಳು ಆಶಯ

[][][]. ಸಂಕೀರ್ಣ ಲೇಖನಗಳು 

1. ಕುಸಿಯುತ್ತಿರುವ ಸಾಂಸ್ಕೃತಿಕ ನೆಲೆಗಳು
  
                            - ರಂಜಾನ್ ದರ್ಗಾ

   ಆಶಯ :

               ಮಾನವನ ಹೃದಯ ಸಮೃದ್ಧಿಯೇ ಸಂಸ್ಕೃತಿಯ ಲಕ್ಷಣ. ಅಲ್ಲಿ ಪ್ರೀತಿ, ಕರುಣೆ,ವಿಶ್ವಾಸ ಪರಧರ್ಮ ಸಹಿಷ್ಣುತೆ, ಸಮಾನತೆಗಳಿಗೆ ಅವಕಾಶವಿದೆ. ಹೀಗಿದ್ದಾಗ ಮಾತ್ರ ಬದುಕು ಸಹನೀಯವಾಗಿರುತ್ತದೆ. ಆದರೆ ಇಂದು ಆಧುನೀಕರಣ, ಜಾಗತೀಕರಣ, ಉದಾರೀಕರಣಗಳು ಭಾರತೀಯರ ಬದುಕಿನ ಚಿತ್ರಣವನ್ನು ತ್ವರಿತಗತಿಯಲ್ಲಿ ಬದಲಿಸುತ್ತ ಸಾಗಿವೆ. ಹಣದಾಹ, ಅಧಿಕಾರಮೋಹ, ಸ್ವಾರ್ಥತೆಗಳು ವಿಜೃಂಭಿಸತೊಡಗಿವೆ. ಬಡವ-ಬಲ್ಲಿದರ ನಡುವಿನ ಅಂತರ ಹೆಚ್ಚಾಗುತ್ತಲೆ ಹೋಗುತ್ತಿದೆ. ಸಂಬಂಧಗಳು ವ್ಯವಹಾರಗಳಾಗಿ ಮಾರ್ಪಡುತ್ತಿವೆ. ಕೋಮುವಾದ ತನ್ನ ಕರಾಳ ಮುಖದರ್ಶನ ಮಾಡಿಸುತ್ತಿದೆ. ಮೌಲ್ಯಗಳು ಸ್ಥಿತ್ಯಂತರಗೊಳ್ಳತ್ತಿವೆ. ಇಂಥ ಹೊತ್ತಿನಲ್ಲಿ ಮನದಾಳದಲ್ಲಿ ಹುದುಗಿ ಹೋಗುತ್ತಿರುವ ಸಂಸ್ಕೃತಿಯ ನೆಲೆಯನ್ನು ಕಾಯ್ದಕೊಂಡು ಹೃದಯಗಳನ್ನು ಬೆಸೆಯುವ ಪ್ರಯತ್ನ ನಡೆಯಬೇಕಿದೆ.

No comments:

Post a Comment