4. ಮಳೆರಾಜನ ಹಾಡು
- ಜನಪದ ಸಾಹಿತ್ಯ
ಆಶಯ :
ಭೂಮಿಯ ಮೇಲಿನ ಅತಿವೃಷ್ಟಿ, ಅನಾವೃಷ್ಟಿ ಎರಡೂ ಭೀಕರ. ಮಳೆ ಬಿದ್ದರೆ ಭೂಮಿ ಹಸನು; ಗಿಡ ಮರ ಬಳ್ಳಿ ಹಸಿರು. ಹಸಿರೇ ಮತ್ತೆ ಮಳಗೆ ಆಸರೆ. ಇದು ಪ್ರಕೃತಿ ಧರ್ಮ, ಇದು ಆವರ್ತ. ಆದರೆ ಅತಿಯಾದ ಮಳೆಯಿಂದ ಭೂಮಿ ಕೊಚ್ಚಿಕೊರೆದು, ತೆನೆಗಳುದುರಿ, ಗಿಡ ಮರಗಳು ಬೇರು ಸಹಿತ ಉರುಳಿ, ಹಾನಿಯಾದರೆ ಅದೊಂದು ಪ್ರಳಯ ಭಯಂಕರ. ಮಳೆ ಇಲ್ಲದೆ ಕೆರೆ, ಹೊಳೆಗಳು ಬತ್ತಿ, ನೀರಿನ ಪಸೆ ಹಿಂಗಿ, ಬೋಳಾದ ಮರಗಳು ಒಣಗಿ, ಬಿರುಕು ಬಿಟ್ಟ ಹೊಲಗದ್ದೆಗಳು, ತಿನ್ನಲು ಆಹಾರ ಅನ್ನವಿಲ್ಲದ ಜೀವ ಜಂತು, ಮಾನವವರ ಹಸಿವಿನ ಹಾಹಾಕಾರ ಇದೊಂದು ಹೃದಯ ವಿದ್ರಾವಕ ಸಂದರ್ಭ.
ಈ ಎರಡರೊಂದಿಗೂ ಹೋರಾಡಿ ಬದುಕುಳಿದಿರುವ ಮಾನವ ಮತ್ತು ಅನಾವೃಷ್ಟಿಯ ಹೊಡೆತಕ್ಕೆ ಸಿಲುಕಿ, ನಲುಗಿದ ಅನಾಮಿಕ ಮನುಷ್ಯನ ಮನದಾಳದ ಸ್ವಾನುಭವವೇ 'ಮಳೆಹಾಡು'. ತನ್ನ ಅನುಭವದ ಸೃಜನಾಭಿವ್ಯಕ್ತಿಯಿಂದ ಕಾವ್ಯರೂಪ ಕೊಟ್ಟ ಜನಪದರು ಶಿಷ್ಟ ಕವಿಗಳಿಗಿಂತ ಶ್ರೇಷ್ಠರು.

No comments:
Post a Comment